ಸಾವರ್ಕರ್ ಫ್ಲೆಕ್ಸ್‍ಗೆ ವಿರೋಧ ವ್ಯಕ್ತಪಡಿಸೋ ಭರದಲ್ಲಿ ಮುಸ್ಲಿಮ್ ಏರಿಯಾ ಹೇಳಿಕೆ ನೀಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಮುಂದುವರೆದಿದೆ. ಕೊಡಗಿನ ಮಳೆ ಹಾನಿ ಪ್ರದೇಶದಲ್ಲಿ ಪ್ರವಾಸ ಕೈಗೊಂಡಿರುವ ಸಿದ್ದರಾಮಯ್ಯಗೆ ಹೋದಲ್ಲೆಲ್ಲಾ ಬಿಜೆಪಿ ಯುವ ಕಾರ್ಯಕರ್ತರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಮಡಿಕೇರಿಯ ತಿಮ್ಮಯ್ಯ ವೃತ್ತದಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಬಿಜೆಪಿ ಪರ ಕಾರ್ಯಕರ್ತರು ಮೊಟ್ಟೆ ಎಸೆದು ಆಕ್ರೋಶ ಹೊರಹಾಕಿದ್ದಾರೆ. ಶಾಂತಿಪ್ರಿಯ ಕೊಡಗಿಗೆ ಟಿಪ್ಪು ಪ್ರೇಮಿ ಸಿದ್ದರಾಮಯ್ಯ ಬರೋದು ಬೇಡ ಎಂದು ಘೋಷಣೆ ಕೂಗಿದ್ದಾರೆ. ಇದರಿಂದ ತಿಮ್ಮಯ್ಯ ವೃತ್ತದಲ್ಲಿ ಕೆಲ ಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣ ಆಗಿತ್ತು. ರಾಜ್ಯದಲ್ಲಿ ಮತಾಂಧ ಟಿಪ್ಪುವಿನ ಜಯಂತಿ ಆಚರಣೆ ಜಾರಿಗೆ ತಂದು ಅಮಾಯಕರ ಕೊಲೆಗೆ ಕಾರಣರಾದ ಟಿಪ್ಪು ಭಕ್ತ ಸಿದ್ಧರಾಮಯ್ಯ ಕೊಡಗಿಗೆ ಕಾಲಿಡುವುದರಿಂದ ಕೊಡಗಿನ ಶಾಂತಿ ಭಂಗವಾಗಲಿದೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಇದಕ್ಕೂ ಮುನ್ನ, ಪೊನ್ನಂಪೇಟೆಯ ತಿತಿಮತಿಯಲ್ಲಿ ಸಿದ್ದರಾಮಯ್ಯ ಕಾರ್‍ಗೆ ಘೇರಾವ್ ಹಾಕಿ, ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಸಾವರ್ಕರ್ ಫೋಟೋವನ್ನು ಸಿದ್ದರಾಮಯ್ಯ ಮಡಿಲಲ್ಲಿಟ್ಟ ಪ್ರತಿಭಟನಾಕಾರರು, ಗೋ ಬ್ಯಾಕ್ ಸಿದ್ದು ಖಾನ್ ಎಂಬ ಘೋಷಣೆ ಕೂಗಿದ್ದಾರೆ. ಇದರಿಂದ ವಿಚಲಿತರಾಗದ ಸಿದ್ದರಾಮಯ್ಯ, ಕೋಯಿನಾಡು, ರಾಮಕೊಲ್ಲಿ ಸೇರಿ ಮಳೆ ಹಾನಿ ಪ್ರದೇಶಗಳ ಪರಿಶೀಲನೆ ನಡೆಸಿ, ಮಾಹಿತಿ ಸಂಗ್ರಹಿಸಿದ್ರು. ನಂತ್ರ ಮಾತನಾಡಿದ ಸಿದ್ದರಾಮಯ್ಯ, ಇದು ಬಿಜೆಪಿ ಪ್ರಾಯೋಜಿತ ಕೃತ್ಯ ಎಂದು ಆರೋಪಿಸಿದ್ದಾರೆ. ನಾವು ಸಿಡಿದ್ರೆ ಸಿಎಂಗೆ ಎಲ್ಲಿ ಓಡಾಡೋಕೆ ಆಗಲ್ಲ ಎಂದು ವಾರ್ನಿಂಗ್ ಕೊಟ್ಟಿದ್ದಾರೆ. ಘಟನೆಯನ್ನು ಯಡಿಯೂರಪ್ಪ ಖಂಡಿಸಿದ್ರೆ, ಗೃಹ ಸಚಿವರು, ವಿಪಕ್ಷ ನಾಯಕರಿಗೆ ಭದ್ರತೆ ಒದಗಿಸ್ತೀವಿ ಎಂದಿದ್ದಾರೆ. ಅತ್ತ ಸಚಿವ ಎಸ್‍ಟಿ ಸೋಮಶೇಖರ್ ಮಾತನಾಡಿ, ಅವರೇನು ಮಾತಾಡ್ತಾ ಇದ್ದಾರೆ ಎಂಬುದು ಅವರಿಗೆ ಅರ್ಥ ಆಗ್ತಿಲ್ಲ.. ಬರೀ ವಿವಾದಾತ್ಮಕ ಹೇಳಿಕೆಗಳನ್ನೇ ನೀಡ್ತಾರೆ. ಇನ್ಮುಂದಾದ್ರೂ ಅವರು ತೂಕದ ಮಾತಾಡ್ಲಿ ಎಂದು ಚಾಮುಂಡಿಯಲ್ಲಿ ಪ್ರಾರ್ಥಿಸಿದ್ದೇನೆ ಅಂದ್ರು.
#publictv #hrranganath #bigbulletin